Next Story
Newszop

ಕಾಂಗ್ರೆಸ್ಗೆ ಮರಳಿದ ಬಿಜೆಪಿ ಸಂಸದ! ಕರಡಿ ಸಂಗಣ್ಣ 9ನೇ ಸಲ ಪಕ್ಷ ಬದಲು

Send Push
-ಗಂಗಾಧರ ಬಂಡಿಹಾಳ ಬಳ್ಳಾರಿ: ರಾಜ್ಯದಲ್ಲಿ 2ನೇ ಹಂತದಲ್ಲಿ ಚುನಾವಣಾ ಪ್ರಚಾರ ಬಿರುಸು ಪಡೆದುಕೊಳ್ಳುತ್ತಿರುವ ಹಂತದಲ್ಲಿ ಕೊಪ್ಪಳದ ಬಿಜೆಪಿ ಸಂಸದ ಕರಡಿ ಸಂಗಣ್ಣ ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಬಿಜೆಪಿಯಿಂದ ಮರು ಸ್ಪರ್ಧೆ ಅವಕಾಶ ವಂಚಿತರಾಗಿ ಅಸಮಾಧಾನಗೊಂಡಿದ್ದರು. ಸುಮಾರು 14 ವರ್ಷಗಳ ಹಿಂದೆ ಕರಡಿ ಸಂಗಣ್ಣ ಜನತಾದಳ ತೊರೆದು ಬಿಜೆಪಿ ಸೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮಾರ್ಗದರ್ಶನದಲ್ಲೇ ಕಾಂಗ್ರೆಸ್‌ ಸೇರ್ಪಡೆಯಾಗಿದ್ದು ಗಮನಾರ್ಹ. ನಿವೃತ್ತ ಐಎಎಸ್‌ ಅಧಿಕಾರಿ ಎ.ಎಸ್‌.ಪುಟ್ಟಸ್ವಾಮಿ, ರಾಜಾಜಿನಗರದ ಕೃಷ್ಣಮೂರ್ತಿ, ಪತ್ರಕರ್ತೆ ಸ್ವಾತಿ ಚಂದ್ರಶೇಖರ್‌ ಕಾಂಗ್ರೆಸ್‌ ಸೇರಿದರು. ಮೂವತ್ತು ವರ್ಷಗಳ ಜಿದ್ದುಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರಿಗೆ ಪಕ್ಷಾಂತರ ಹೊಸತೇನಲ್ಲ! ಆದರೆ, 30 ವರ್ಷಗಳ ರಾಜಕೀಯ ವೈರಿ ಹಿಟ್ನಾಳ್‌ ಕುಟುಂಬದ ಜತೆ 'ಕೈ' ಜೋಡಿಸಿರುವುದೇ ಆಶ್ಚರ್ಯ ತಂದಿದೆ. ಎರಡು ಬಾರಿ ಸಂಸದರಾಗಿದ್ದ ಅವರಿಗೆ ಹ್ಯಾಟ್ರಿಕ್‌ ಸ್ಪರ್ಧೆಯ ಬಯಕೆಗೆ ಬಿಜೆಪಿ ತಣ್ಣೀರು ಎರಚಿದೆ. ಹೀಗಾಗಿ ಕಾಂಗ್ರೆಸ್‌ ಮನೆಯ ಹೊಸ್ತಿಲು ತುಳಿದಿದ್ದಾರೆ. ಅವರ ರಾಜಕೀಯ ಪ್ರವೇಶದಿಂದಲೇ ಪಕ್ಷಾಂತರ ಪರ್ವ ಶುರುವಾಗಿದೆ. ಕಾಂಗ್ರೆಸ್‌ನಿಂದ ರಾಜಕೀಯ ಜೀವನ ಆರಂಭಿಸಿದ್ದರು. 1978ರ ಚುನಾವಣೆಧಿಯಿಂದಲೂ ಕರಡಿ ಹಾಗೂ ಹಿಟ್ನಾಳ್‌ ಕುಟುಂಬಗಳು ಪರಸ್ಪರರು ರಾಜ ಕೀಯ ಎದುರಾಳಿಯಾದವು. ಈ ಕುಟುಂಬಗಳ ರಾಜ ಕಾರಣ 30 ವರ್ಷಗಳಿಗೆ ಮುಂದುವರಿಯಿತು. ಕೊಪ್ಪಳ ವಿಧಾನಸಭೆ ಕ್ಷೇತ್ರದಲ್ಲಿ ಕರಡಿ ಅಥವಾ ಹಿಟ್ನಾಳ್‌ ಕುಟುಂಬ ಬಿಟ್ಟರೆ ಮತ್ಯಾರೂ ಗೆಲ್ಲುವುದಿಲ್ಲ ಎನ್ನುವ ಭಾವನೆ ಮೂಡಿದೆ. ಉಭಯ ಕುಟುಂಬ ಬೇರೆಯವರನ್ನು ಬೆಳೆ ಯಲು ಬಿಡುವುದಿಲ್ಲಎನ್ನುವ ಆರೋಪ ಮಧ್ಯ ಮೊದಲ ಬಾರಿ ಹಿಟ್ನಾಳ್‌, ಕರಡಿ ಕುಟುಂಬಗಳು ಒಂದಾಗಿವೆ. ಚರ್ಚೆಗೆ ಗ್ರಾಸಪಕ್ಷಾಂತರ ಪ್ರವೀಣ ಎನಿಸಿರುವ ಸಂಗಣ್ಣ ಕರಡಿ ಅವರಿಗೆ ಯಾವ ಪಕ್ಷವೂ ಹೊಸದಲ್ಲ. ಪಕ್ಷದ ಮುಖಂಡರೂ ಹೊಸಬರಲ್ಲ. ಸತತ ಮೂರು ಬಾರಿ ಒಂದೇ ಪಕ್ಷದಿಂದ ಸ್ಪರ್ಧಿಸಿದ ಉದಾಹರಣೆ ಇಲ್ಲ. ಅವರ ಪಕ್ಷಾಂತರದಿಂದ ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಲಾಭವೋ? ನಷ್ಟವೋ? ಬೇಕಾಗಿಲ್ಲ. ಆದರೆ, ತಮ್ಮ ಬದ್ಧ ಎದುರಾಳಿ 'ಹಿಟ್ನಾಳ್‌' ಕುಟುಂಬದ ಜತೆಗೆ 'ಕೈ' ಜೋಡಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಪಕ್ಷಾಂತರ ಪರ್ವ
  • 1978ರಲ್ಲಿ ತಾಲೂಕು ಅಭಿವೃದ್ಧಿ ಮಂಡಳಿಗೆ ಕಾಂಗ್ರೆಸ್‌ನಿಂದ ಆಯ್ಕೆ
  • 1983ರಲ್ಲಿ ಜನತಾ ಪಕ್ಷದಿಂದ ಜಿಲ್ಲಾ ಪರಿಷತ್‌ ಗೆ ಆಯ್ಕೆ
  • 1994ರಲ್ಲಿ ಮೊದಲ ಬಾರಿ ವಿಧಾನಸಭೆಗೆ ಪಕ್ಷೇತರರಾಗಿ ಆಯ್ಕೆ
  • 1999ರಲ್ಲಿ ಜೆಡಿಯುಗೆ ಜಿಗಿತ
  • 2004ರ ಚುನಾವಣೆಯಲ್ಲಿ ಬಿಜೆಪಿ ತೆಕ್ಕೆಗೆ
  • 2008ರಲ್ಲಿ ಜೆಡಿಎಸ್‌ಗೆ ಜಂಪ್
  • 2011ರಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ
  • 2011ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು
  • 2013ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲು
  • 2014 ಹಾಗೂ 2019ರ ಲೋಕಸಭೆ ಆಯ್ಕೆ
  • 2018 ಹಾಗೂ 2023ರ ವಿಧಾನಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರ ಬಿಟ್ಟು ಕೊಡಲಿಲ್ಲ (ಪುತ್ರ ಅಮರೇಶ್ ಕರಡಿ ಹಾಗೂ ಸೊಸೆ ಮಂಜುಳಾ ಕರಡಿಗೆ ಟಿಕೆಟ್ ತರುವಲ್ಲಿ ಯಶ
Loving Newspoint? Download the app now